ಜಗನ್ ಗೆ ಆಶಿತಾ ಮುತ್ತು ಕೊಟ್ಟ ಗುಟ್ಟು ಅನುಪಮಾ ಮುಂದೆ ರಟ್ಟು! ಜಗನ್ನಾಥ್ ಚಂದ್ರಶೇಖರ್... ಅನುಪಮಾ ಗೌಡ ಮಾಜಿ ಪ್ರಿಯಕರ ಎಂಬ ಸತ್ಯ ಗೊತ್ತಿದ್ದರೂ, ಜಗನ್ ಜೊತೆಗೆ ಆಶಿತಾ ಕ್ಲೋಸ್ ಆಗಿದ್ದಾರೆ. ಸದಾ ಜಗನ್ ಪಕ್ಕದಲ್ಲೇ ಆಶಿತಾ ಇರುತ್ತಾರೆ. ತಮ್ಮ ಜೊತೆ ಜಗನ್ ಸರಿಯಾಗಿ ಮಾತನಾಡಲಿಲ್ಲ ಅಂದ್ರೆ, ಆಶಿತಾಗೆ ಕಿರಿಕಿರಿ ಆಗುತ್ತೆ. ಇಷ್ಟೆಲ್ಲ ನಡೆಯುತ್ತಿರುವಾಗಲೇ, 'ಬಿಗ್ ಬಾಸ್' ಮನೆಯಲ್ಲಿ ಜಗನ್ ಕೆನ್ನೆಗೆ ಆಶಿತಾ ತುಟಿ ಒತ್ತಿದ್ದಾರೆ. ಜಗನ್ ಕೆನ್ನೆಗೆ ಆಶಿತಾ ಸಿಹಿ ಮುತ್ತು ನೀಡಿರುವ ವಿಷಯ ಮಾಜಿ ಪ್ರೇಯಸಿ ಅನುಪಮಾ ಗೌಡ ಇಲ್ಲಿಯವರೆಗೂ ಗೊತ್ತಿರಲಿಲ್ಲ. ಆದ್ರೆ, ಈಗ 'ಕಪಾಲಿ ಚಿತ್ರಮಂದಿರ'ದ ಕೃಪೆಯಿಂದ ಜಗನ್ ಕೆನ್ನೆ ಕೆಂಪಾದ ಸಂಗತಿ ಅನುಪಮಾ ಗೌಡ ಅರಿವಿಗೆ ಬಂದಿದೆ. ಆಧುನಿಕ ನಗರದ ಜನ ಜೀವನದ ಶೈಲಿಯನ್ನ ಪರಿಚಯಿಸುವ ಸಲುವಾಗಿ 'ಬಿಗ್ ಬಾಸ್ ನಗರ' ಲಕ್ಷುರಿ ಬಜೆಟ್ ಟಾಸ್ಕ್ ನ 'ಬಿಗ್ ಬಾಸ್' ನೀಡಿದ್ದರು. ಇದರ ಅನುಸಾರ ಮನೆಯ ವಿವಿಧ ಜಾಗಗಳಿಗೆ ವಿವಿಧ ಹೆಸರು ನೀಡಲಾಗಿತ್ತು. ಅದರಂತೆ ಕನ್ಫೆಶನ್ ಕೋಣೆಗೆ 'ಕಪಾಲಿ ಚಿತ್ರಮಂದಿರ' ಅಂತ ಹೆಸರು ಇಡಲಾಗಿತ್ತು.